ಅತಿಮಾನವ (Overman)
ಫ್ರೆಡರಿಕ್ ನೀಷೆ ತುಂಬಾ ಆಳವಾದ ಚಿಂತನೆಗಳಲ್ಲಿ ತೊಡಗಿಕೊಳ್ಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಏಕಾಂತದಲ್ಲಿದ್ದಾಗ ತನಗೆ ತಾನೇ ಕೆಲವು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದರು. ಜನರು ತಾವು ಸೃಷ್ಟಿಸಿರದ ನಿಯಮಗಳನ್ನು ಏಕೆ ಅನುಸರಿಸುತ್ತಾರೆ? ಜನರು ವಿಭಿನ್ನವಾಗಿ ಬದುಕಲು ಏಕೆ ಭಯ ಪಡುತ್ತಾರೆ? ನಿಜವಾಗಿ, ಜೀವನದಲ್ಲಿ ಬದುಕಲು ಪ್ರೇರೇಪಿಸುವುದಾದರೂ ಏನು? ನೀಷೆ ತನ್ನ ಸುತ್ತಲಿನ ಜನರೆಲ್ಲಾ ಅದೇ ಕೆಲಸವನ್ನು ಪದೇಪದೇ ಮಾಡುವುದನ್ನು ನೋಡಿದ: ಶಾಲೆಗೆ ಹೋಗುವುದು, ಆದೇಶಗಳನ್ನು ಪಾಲಿಸುವುದು, ಪ್ರಾರ್ಥನೆ ಮಾಡುವುದು, ಕೆಲಸಕ್ಕೆ ಹೋಗುವುದು, ಮಲಗುವುದು. ಅದರಲ್ಲಿ ಹೆಚ್ಚಿನ ಜನ "ಏಕೆ" ಎಂಬ ಪ್ರಶ್ನೆ ಜೀವನದಲ್ಲಿ ಎಂದಿಗೂ ಕೇಳುವುದಿಲ್ಲ. ಅವರೂ ತಮ್ಮ ಸುತ್ತಮುತ್ತಲಿನ ಜನರನ್ನು ಕುರಿಯ ಹಿಂಡಿನಂತೆ ಅನುಸರಿಸುತ್ತಾರೆ. ಆದರೆ ನೀಷೆ “ಇನ್ನೂ ಕುರಿಗಳಾಗುವುದು ಬೇಡ. ನಮಗೆ ಸಿಂಹಗಳು ಬೇಕು. ನಮಗೆ ಸೃಷ್ಟಿಕರ್ತರು ಬೇಕು. ನಮಗೆ ಧೈರ್ಯವಾಗಿ ಜೀವನವನ್ನು ಸ್ವತಂತ್ರವಾಗಿ ಬದುಕುವವರು ಬೇಕು.” ಎಂದು ಹೇಳಿದರು. ಹೀಗಾಗಿ ಅವರು ಹೊಸ ರೀತಿಯ ಮಾನವನ ಕಲ್ಪನೆಯನ್ನು ಕೊಟ್ಟರು. ಇತರರನ್ನು ನಕಲಿ ಮಾಡದೇ, ಸೃಷ್ಟಿಸುವ, ಆಜ್ಞೆಗಳನ್ನು ಪಾಲಿಸದೆ, ಯೋಚಿಸುವ, ಹೊಸ ರೀತಿಯ ಮಾನವ. ನೀಷೆ ಅವನನ್ನು ಅತಿಮಾನವ (Overman) ಎಂದು ಕರೆದರು. ಅತಿಮಾನವ ಎಂದರೇನು? ಅತಿಮಾನವ (ಅಥವಾ ಜರ್ಮನ್ ನಲ್ಲಿ ...